Bhasaka
← Back to home

ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ

Author: ವಿಜಯದಾಸCategory: ಶ್ರೀಕೃಷ್ಣ
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ ಸರಸಿಜಭವಾಗ್ರಜರುಳಿದವಾರು ವರ ಸಕಲ ಮನೋಭೀಷ್ಟ ಕೈಕೊಳುತಾ ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ ||1|| ಎತ್ತಿದ ಸತ್ತಿಗೆಯಿಂದ ಪೀಯೂಷ ಸುತ್ತಲುದರೆ ಬಿಂದುಗಳೊಂದು ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ ||2|| ದಂಡಿಗೆ ತಾಳ ಬೆತ್ತವ ಪಿಡಿದು ನಿಂದು ತಂಡ ತಂಡದಲಿಂದ ಮಹಿಮೆಯನ್ನು ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ ತೊಂಡರು ಹರಿದಾಡಿ ಹಾಡಿ ಪಾಡುತಲಿರೆ||3|| ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ ರವಿ ಶಶಿ ತುರಗ ಅಂದಣ ಮಿಕ್ಕಾದ ನವರಾತ್ರಿಯೊಳಗೆಲ್ಲ ವಾಹನನಾದ ಅಂ ದವನಾರು ಬಣ್ಣಿಪರು ಸಕಲ ಭೂಷಿತವಾಗೆ ||4|| ಚಿನುಮಯ ರೂಪ ವಿಚಿತ್ರ ಮಹಿಮ ದೇವ ನೆನೆದವರ ಹಂಗಿಗೆ ಸಿಲುಕುವಾ ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ ||5||

Thoughts & Reflections

0

No reflections shared yet. Be the first to share your thoughts!

Share your thought