Bhasaka
← Back to home

ಗುರು ವಾದಿರಾಜ ರವಿಕೋಟಿ

Author: ವಿಜಯದಾಸCategory: ಇತರೆ
ಗುರು ವಾದಿರಾಜ ರವಿಕೋಟಿ ತೇಜಾ ಶರಣೆಂಬೆನಯ್ಯಾ ಸತತಗೇಯಾ ನಂಬಿದೆನು ನಿನ್ನ ದಯ ಸಂಪನ್ನ ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ||1|| ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದ e್ಞÁನವೆ ಎಂಬೊ ನಿಜವೆಂಬ ಫಲ ||2|| ಮಾಯಿಗಳ ವದ್ದ ಮಮತಾ ಗೆದ್ದ ಗಾಯನ ಪ್ರಸಿದ್ಧ ಗುಣದಲಿ ಇದ್ದ ||3|| ನಾನಾ ಚಾರಿತ್ರ ತೋರಿದ ಮಿತ್ರ ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ||4|| ಸಂತತ ವಿರಕ್ತ ಜೀವನ ಮುಕ್ತಾ ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ||5|| ಸ್ವಾದಿಪುರವಾಸ ಸಾಧುಗುಣ ಭಾಸಾ ಸದ್ಭಕುತ ಪೋಪ ಮಧ್ವಮುನಿಯ ದಾಸಾ ||6|| ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಿ||7||

Thoughts & Reflections

0

No reflections shared yet. Be the first to share your thoughts!

Share your thought