Bhasaka
← Back to home

ಗುರುವಶಕೆ ನಮೋ ಎಂಬೆ

Author: ವಿಜಯದಾಸCategory: ಶ್ರೀಗುರು
ಗುರುವಶಕೆ ನಮೋ ಎಂಬೆ ನಮ್ಮ ಮರುತ ಮತಾಬ್ದಿಗೆ ನಮೋ ಎಂಬೆ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ ||1|| ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ ||2|| ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ಸಾಧುಜನ ಪ್ರಿಯ ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ | ವಾದಿಗಜಕೆ ಸಿಂಹ ಸತ್ಯನಾಥರಿಗೆ ||3|| ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ | ಸತತ ಸಜ್ಜನಪಾಲ ಸತ್ಯಪೂರ್ಣರಿಗೆ || ಅತಿಶಯವಾನಂದ ಸತ್ಯ ವಿಜರಿಗೆ | ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ||4|| ಇಂತು ಗುರುಗಳ ಸಂತರೆ ಕೊಂಡಾಡಿ ಇಂತು ಸುತಾಪವನುರುಹಿ ಬಿಟ್ಟು || ಸಂತೋಷಿ ನಾನಾದೆ ವಿಜಯವಿಠ್ಠಲನ್ನ ಚಿಂತಿಯ ಮಾಡುವೆ ದಾಸರ ದಯದಿಂದ ||5||

Thoughts & Reflections

0

No reflections shared yet. Be the first to share your thoughts!

Share your thought