Bhasaka
← Back to home

ಗೋದೆ ಅತಿ ಪುಣ್ಯ ಸಾಧೆ

Author: ವಿಜಯದಾಸCategory: ಶ್ರೀಗಂಗೆ
ಗೋದೆ ಅತಿ ಪುಣ್ಯ ಸಾಧೆ ಮಾಧವನ ಚರಣಾರವಿಂದೆ ಪಾದೆ ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ ಎದ್ದೋಡಿ ತಿರುಗಿ ನೋಡದೆ ಹೋಹವು ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ||1|| ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ ವಂದನೆಯ ಮಾಡಿ ಸಾಷ್ಟಾಂಗೆರಗಲೂ ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ ಒಂದು ಉಳಿಯದಂತೆ ಬೆಂದು ಹೋಹವು ||2|| ಅತಿವೇಗದಿಂದ ಬಂದು ಸ್ನಾನವನು ಮಾಡಲು ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ||3||

Thoughts & Reflections

0

No reflections shared yet. Be the first to share your thoughts!

Share your thought