Bhasaka
← Back to home

ಚಿಂತೆ ಮಾಡುವುದ್ಯಾಕೆ ಮನವೆ ನೀನು

Author: ವಿಜಯದಾಸCategory: ವೈರಾಗ್ಯ
ಚಿಂತೆ ಮಾಡುವುದ್ಯಾಕೆ ಮನವೆ ನೀನು ಪಿಂತೆನ್ಯೆಸಗಿದ ಕರ್ಮ ಎಂದಿಗಾದರೂ ಬಿಡದು ಮಗನಾರು ನೀನಾರು ಪೇಳೊ ಸಿದ್ಧ ನಿಗಮಾರ್ಥಗಳಿಂದ ಸಜ್ಜನರ ಕೇಳೊ ತಗಿದು ಕಳಿ ಶೋಕದ ಗೋಳು ನಿತ್ಯ ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ ||1|| ಸಾಹನಶಕ್ತಿಯನ್ನು ಮಾಡೊ ಬರಿದೆ ಸ್ನೇಹ ಮಾಡಿದರಿಂದ e್ಞನಕ್ಕೆ ಕೇಡು ತಾಹಾದು ಸ್ಥಿರವೆಂದು ನೋಡೊ ನೀನೂ ಮಾಹಪದವಿಗೆ ಬಂದೆ ಸುದೃಢವೆ ಬೇಡು||2|| ವಿರಕ್ತಿ ತೊಡು ತೊಡು ಬಿಡದೆ ಎಂದು ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ ವಾರವಾರಕೆ ಹೀಗೆ ಕೆಡದೇ ಶ್ರಿಂ ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ ||3||

Thoughts & Reflections

0

No reflections shared yet. Be the first to share your thoughts!

Share your thought