Bhasaka
← Back to home

ಚಿಂತೆಯಾತಕೆ ನಿನಗೆ ಎಲೆ

Author: ವಿಜಯದಾಸCategory: ಶ್ರೀಕೃಷ್ಣ
ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ ||1|| ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಸ್ತರ ಪುಣ್ಯ ಬಂದು ಈ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ ||2|| ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು ಹೃದಯಮಧ್ಯ ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ ಸಾರದೊಳಗಿದ್ದ ಸುಖವಿನಿತುಂಟು ರಮಣೀ ||3|| ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ ಪಿಂತೆ ಕಾಂತಾರದಲಿ ಬಾಲಮೃಗನ ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ- ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ ||4|| ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು ಮಾಜಿಕೊಂಡಿದ್ದು ಜನರಂತೆ ನಡದು ಮೂಜಗತ್ಪತಿ ಸಿರಿ ವಿಜಯವಿಠ್ಠಲನ ಸ ರೋಜ ಚರಣವನು ಪೂಜಿಸುವೆನು ರಮಣೀ ||5||

Thoughts & Reflections

0

No reflections shared yet. Be the first to share your thoughts!

Share your thought