Bhasaka
← Back to home

ಚಿಂತೆಯಾತಕೆ ಮನವೆ ನಿನಗಿದು

Author: ವಿಜಯದಾಸCategory: ಶ್ರೀಕೃಷ್ಣ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ನಿಂತು ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಣಿಗ್ರಹ ಮಾಡಿಪ (ರಾವ) ಗವುಗಾದರೂ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ ||1|| ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಸುರ ನರೋರುಗ ಏಕತ್ರಗಳ ಮಾಡಿ ಶರಣರಿಂದಾಳಿಸುವ ನಿಶ್ಚಯ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ||2|| ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು||3|| ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ e್ಞನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ||4|| ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಎಲ್ಲಿ ಇದ್ದರು ನಿನ್ನ ಬಳಿಯಲ್ಲಿ ಸಲ್ಲುತಿಪ್ಪದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ ||5|| ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಅನನ್ಯನಾಗಿರು ಆತ ನಿನಗೆ ರಾಜೆಂದು ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ ||6|| ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವೂತ್ತರವನು ತಿಳಿದು ಸರ್ವದ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ||7||

Thoughts & Reflections

0

No reflections shared yet. Be the first to share your thoughts!

Share your thought