Bhasaka
← Back to home

ಚಿರಂಜೀವಿಯಾಗಿರೆಲೊ ಚಿಣ್ಣ ನೀನು

Author: ವಿಜಯದಾಸCategory: ಶ್ರೀಕೃಷ್ಣ
ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪರಮ ಭಾಗವತರ ಪದಧೂಳಿ ಧರಿಸುತಲಿ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ ||3|| ಪಂಡಿತರು ಪಾಮರರು ಆರಿಗಾದರೂ ನಿನ್ನ ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ||4|| ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ||5||

Thoughts & Reflections

0

No reflections shared yet. Be the first to share your thoughts!

Share your thought