Bhasaka
← Back to home

ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ

Author: ವಿಜಯದಾಸCategory: ಶ್ರೀಕೃಷ್ಣ
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಅಘಗಳ ಕಳೆವ ಅಮೋಘದೇವನ ಭಕುತರ ಕಾವನ ಎನ್ನಯ ಜೀವನ ಮೃಗಲಾಂಛನ ವದನೆ ಮೃದು ಸರಸಿಜ ಸದನೆ ಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ ಕಿರೀಟಿಯ ಬೀಗನ್ನ||1|| ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ ದಶಾವತಾರನ್ನ ||2|| ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ ವಿಜಯವಿಠ್ಠಲ ಶ್ರೀನಿವಾಸನ ತಿರುವೆಂಗಳೇಶನ ಜಗವ ಪೋಷನ ||3||

Thoughts & Reflections

0

No reflections shared yet. Be the first to share your thoughts!

Share your thought