Bhasaka
← Back to home

ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ

Author: ವಿಜಯದಾಸCategory: ಶ್ರೀದೇವಿ
ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ ಮುರಹರನ ವರ್ಣ ಪೆಸರವನೇ ಪೊತ್ತು ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ ಪೊರಿದೆ ಶರಣಾಗತರ ದುರಿತಗಳ ತರಿದೆ ||1|| ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ ಆ ಸಲಿಲ ಬಿಂದು ಪವಮಾನ ಬಂದೂ ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ||2|| ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ ಕೃಷ್ಣವಾರ ವಿಷ್ಣು ತಾರೆಯಲ್ಲೀ ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ ||3|| ಸೂರಪಾಲಿ ಕಪಟ ಸಂಗಮಛಾಯಾ ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು ವಾರಣಾಶಿಯ ಫಲಗರೆದು ಜೀವನ್ಮು ಕ್ತರನು ಮಾಡಿ ಪೊರದೇ ||4|| ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ ಗ್ಗಳವೆಂದು ಅಜನ ಸತಿ ಪೊಗಳಲು ಜಲನಿಧಿಯ ಉಭಯಮುಖದಲಿ ಕೂಡಿ ಭಕ್ತರಿಗೆಒಲಿದು ಸಿರಿ ವಿಜಯವಿಠ್ಠಲ ಕಾಣಿಸಿದಿಯಾ||5||

Thoughts & Reflections

0

No reflections shared yet. Be the first to share your thoughts!

Share your thought