Bhasaka
← Back to home

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ

Author: ವಿಜಯದಾಸCategory: ಶ್ರೀಗಣೇಶ
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ||1|| ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ||2|| ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ ||3||

Thoughts & Reflections

0

No reflections shared yet. Be the first to share your thoughts!

Share your thought